Guruji Home    ಪುನರಾವರ್ತಿತ ಪ್ರಶ್ನೆಗಳು

ಮುಖ್ಯ ಪುಟ
ಗುರುಜಿಯ ಬಗ್ಗೆ
ನಿರ್ವಹಣಾ ತಂಡ
ಹೂಡಿಕೆದಾರರು
ನಮ್ಮನ್ನು ಸಂಪರ್ಕಿಸಿ
ಪುನರಾವರ್ತಿತ ಪ್ರಶ್ನೆಗಳು
ಉದ್ಯೋಗ ಅವಕಾಶ
ಪತ್ರಿಕೆಗಳಲ್ಲಿ
ಸಮಾಚಾರಗಳಲ್ಲಿ ಗುರುಜಿ
 

  1. ವೆಬ್ ಮಾಸ್ಟರ್ ಸಂದೇಹ ಪರಿಹಾರ ಪ್ರಶ್ನೆಗಳು
  2. ಸ್ಥಳೀಯ ಸಂದೇಹ ಪರಿಹಾರ ಪ್ರಶ್ನೆಗಳು
  3. ಸಾಮಾನ್ಯ ಸಂದೇಹ ಪರಿಹಾರ ಪ್ರಶ್ನೆಗಳು

ವೆಬ್ ಮಾಸ್ಟರ್ ಸಂದೇಹ ಪರಿಹಾರ ಪ್ರಶ್ನೆಗಳು:-
  1. ಗುರೂಜಿಬಾಟ್ ಎಂದರೆ ಏನು ?
    ಗುರೂಜಿ ವೆಬ್ ಕ್ರಾಲರ್ ನ್ ಬಳಕೆದಾರರ ಕಾರ್ಯಸಾಧಕವಾಗಿದೆ.ಮುಂದಿನ ಪೀಳಿಗೆಯ ಸರ್ಚ್ ಶೋಧಕ ತಂತ್ರಾಂಶ ಒಂದನ್ನು ಅಭಿವೃದ್ಧಿ ಪಡಿಸಲು ಗುರೂಜಿ ಯತ್ನಿಸುತ್ತಿದೆ.

  2. ನನ್ನ ಜಾಲತಾಣವನ್ನು ಗುರೂಜಿ ಕ್ರಾಲರ್ ಮಾಡದಂತೆ ತಡೆಯುವುದು ಹೇಗೆ?
    ಗುರೂಜಿಬಾಟ್ ಉತ್ತಮ ರಚನಾ ವಿನ್ಯಾಸದ ರೋಬೋಟ್ ಹೊರತು ಪಡಿಸುವಿಕೆ ನೀತಿ ಸಂಹಿತೆಯನ್ನು ಅನುಸರಿಸುತ್ತದೆ ಮತ್ತು ಪ್ರೋಟೋಕಾಲ್ ಅವಕಾಶ ನೀಡದಿದ್ದರೆ,ನಿಮ್ಮ ಸೈಟ್ ನಲ್ಲಿ ಕ್ರಾಲರ್ ಮಾಡುವುದಿಲ್ಲ.ಉದಾಹರಣೆಗೆ ಗುರೂಜಿ ಬಾಟ್ ನಿಮ್ಮ ಜಾಲತಾಣದಲ್ಲಿ ಕ್ರಾಲರ್ ಮಾಡುವುದನ್ನು ತಪ್ಪಿಸಲು ಈ ಕೆಳಕಂಡ ಸಾಲಗಳನ್ನು ರೋಬೋಟ್ಸ್ ಡಾಟ್ ಟೆಕ್ಸ್ಟ್ ಫೈಲ್ ಗಳನ್ನು ಸೇರಿಸಿಕೊಳ್ಳಿ :

    User-agent: GurujiBot
    Disallow: /cgi

    ಏನಾದರೂ ಪ್ರಶ್ನೆಗಳಿದ್ದರೆ: contact@guruji.com ಗೆ ರವಾನಿಸಿ.
ಸ್ಥಳೀಯ ಸಂದೇಹ ಪರಿಹಾರ ಪ್ರಶ್ನೆಗಳು:-
  1. ಸ್ಥಳೀಯ ಶೋಧನೆ ಎಂದರೆ ಏನು ?
    ಗುರೂಜಿಯಿಂದ ರೂಪಿಸಲಾದ ಸ್ಥಳೀಯ ಶೋಧನೆ ನಿಮಗೆ ಬೇಕಾದ ಮಾಹಿತಿಯನ್ನು ಅತಿ ವೇಗವಾಗಿ ದೊರಕಿಸಿಕೊಡುತ್ತದೆ. ನಿಮ್ಮ ಮೆಚ್ಚುಗೆಯ ಹೋಟಲ್ ಹಲ್ಲಿನ ವೈದ್ಯರು, ವೈದ್ಯರು ಮತ್ತು ಇತರ ದಿನನಿತ್ಯದ ಅಗತ್ಯ ಮಾಹಿತಿಯನ್ನು ತಕ್ಶಣದಲ್ಲೇ ಒದಗಿಸಿಕೊಡಲು ಇದು ನೆರವಾಗುತ್ತದೆ.

  2. ಯಾವ ಯಾವ ನಗರಗಳಲ್ಲಿನ ಮಾಹಿತಿಯನ್ನು ಇದು ಒದಗಿಸುತ್ತದೆ?
    ಗುರೂಜಿ ಸದ್ಯ ಈ ಕೆಳಕಂಡ ನಗರಗಳ ಮಾಹಿತಿಯನ್ನು ಒದಗಿಸುತ್ತದೆ:

    Bangalore Surat Goa Ludhiana Delhi
    Chandigarh Mangalore Chennai Noida Hyderabad
    Ranchi Kolkata Rajkot Mumbai Pune
    Thiruvananthapuram Gurgaon Varanasi Indore Jaipur
    Kanpur Vijayawada Tirunelveli Madurai Mysore
    Vadodara Jamshedpur Coimbatore Jodhpur Pondicherry
    Agra Bhopal Vizag  

    ಎಲ್ಲ ನಗರಗಳ ಬಗ್ಗೆ ಒಂದೇರೀತಿಯಲ್ಲಿ ಮಾಹಿತಿಗಳನ್ನು ನೀಡಿಲ್ಲದಿದ್ದರೂ ನಾವು ಸಾಧ್ಯವಾದಷ್ಟೂ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಿದ್ದೇವೆ.  ಇತರ ನಗರಗಳ ಮಾಹಿತಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಈ ಪಟ್ಟಿಯನ್ನು ಸಮಗ್ರೀಕರಿಸಲು ಶ್ರಮಿಸುತ್ತಿದ್ದೇವೆ. ನಿಮ್ಮ ಗಮನಕ್ಕೆ ಬಂದಿರುವ ಬಿಟ್ಟುಹೋಗಿರಬಹುದಾದ ಯಾವುದೇ ಪ್ರಮುಖ ವಾಣಿಜ್ಯ ಮಾಹಿತಿಯನ್ನು ಸಲ್ಲಿಸಲು ಕೋರಲಾಗಿದೆ.

ಸಾಮಾನ್ಯ ಸಂದೇಹ ಪರಿಹಾರ ಪ್ರಶ್ನೆಗಳು :-
  1. ನಾನು ಮಾಹಿತಿಯನ್ನು ಕೋರಿದಾಗ ಭಾರತಕ್ಕೆ ಸಂಬಂಧಿಸಿರದ ಜಾಲತಾಣಗಳು  ಏಕೆ ಕಾಣಿಸಿಕೊಳ್ಳುತ್ತದೆ?
    ಗುರೂಜಿಯನ್ನು ಭಾರತದ ಸಮಗ್ರ ಮಾಹಿತಿಯನ್ನು ಒದಗಿಸುವ ಶೋಧಕ ತಂತ್ರಾಂಶವನ್ನು ರೂಪಿಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಪಡುತ್ತಿದ್ದೇವೆ. ಹಾಗೊಂದು ವೇಳೆ ಭಾರತಕ್ಕೆ ಸಂಬಂಧಿಸಿರದ ಜಾಲತಾಣಗಳು  ಕಂಡು ಬಂದಲ್ಲಿ ತಕ್ಷಣವೇ feedback@guruji.com ಗೆ ಮಾಹಿತಿಯನ್ನು ರವಾನಿಸಲು ಕೋರುತ್ತೇವೆ.

  2. ಗುರೂಜಿ ಡಾಟ್ ಕಾಂನಲ್ಲಿ ನನ್ನ ಜಾಲತಾಣ  ಹೇಗೆ ಕಾಣಿಸುತ್ತದೆ?
    ಭಾರತಕ್ಕೆ ಸಂಬಂಧಪಟ್ಟ ನಿಮ್ಮ ಜಾಲತಾಣವನ್ನು submit url site ಮೂಲಕ ಸೇರಿಸಬಹುದು.ಇದನ್ನು ಮಾಡಿದಲ್ಲಿ ತಕ್ಶಣವೇ ಗುರೂಜಿಬಾಟ್ ನಿಮ್ಮ ಜಾಲತಾಣಕ್ಕೆ ಭೇಟಿ ನೀಡಿ ಅದನ್ನು ತನ್ನ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತದೆ. ಮೂರರಿಂದ ನಾಲ್ಕು ವಾರಗಳಲ್ಲಿ ಗುರೂಜಿ ಡಾಟ್ ಕಾಂನಲ್ಲಿ ನಿಮ್ಮ ಜಾಲತಾಣವನ್ನು ವೀಕ್ಶಿಸಬಹುದಾಗಿದೆ.

  3. ನನ್ನ ಜಾಲತಾಣವನ್ನು ಸೇರಿಸಿದ್ದರೂ ಅದನ್ನು ವೀಕ್ಷಿಸಲು ಆಗುತ್ತಿಲ್ಲ ಏಕೆ?
    ಇದಕ್ಕೆ ಎರಡು ಕಾರಣಗಳಿರಬಹುದು
    1. ನಿಮ್ಮ ಜಾಲತಾಣವನ್ನು ಇತ್ತೀಚೆಗೆ ಸೇರ್ಪಡೆಗೊಳಿಸಿದ್ದು ಇತ್ತೀಚಿನ ಕ್ರಾಲರ ನಿಂದ ಆಕಸ್ಮಿಕವಾಗಿ ತಪ್ಪಿರಬಹುದು. ನೀವು ಸುಮಾರು ಮೂರು ನಾಲ್ಕು ವಾರಗಳವರೆಗೆ ಅದಕ್ಕಾಗಿ ಕಾಯುವುದು ಉಚಿತ.
    2. ನಿಮ್ಮ ಜಾಲತಾಣವು ಭಾರತಕ್ಕೆ ಸಂಬಂಧಪಟಿಲ್ಲ ಆದ್ದರಿಂದ ಗುರೂಜಿ ಅದನ್ನು ಕೈಬಿಟ್ಟಿರಬಹುದು.

  4. ನನ್ನ ವಾಣಿಜ್ಯೋದ್ಯಮದ ವಿವರಗಳನ್ನು ನಿಮ್ಮ ಪಟ್ಟಿಗಳಿಗೆ ಅಳವಡಿಸುವುದು ಹೇಗೆ?
    ಸಧ್ಯದಲ್ಲೆ ಕೆಲವು ಕೀಲಿಗಳನ್ನು ಕ್ಲಿಕ್ ಮಾಡುವ  ಮೂಲಕ ನಿಮ್ಮ ವಾಣಿಜ್ಯೋದ್ಯಮದ ವಿವರಗಳನ್ನು ನಮ್ಮ ಪಟ್ಟಿಗಳಿಗೆ  ಸೇರಿಸುವ ಸೌಲಭ್ಯವನ್ನು ಒದಗಿಸಲಾಗುವುದು. ಆದ್ದರಿಂದ ಸ್ವಲ್ಪ ಕಾಲಾವಕಾಶದ ಅಗತ್ಯವಿರುತ್ತದೆ.

  5. ಎಷ್ಟೋ ಸಲಹೆ ಸೂಚನೆಗಳನ್ನು ರವಾನಿಸಲು ಬಯಸುತ್ತೇನೆ ಇದಕ್ಕಾಗಿ ನಾನು ಏನು ಮಾಡಬೇಕು?
    ದಯವಿಟ್ಟು ಅವುಗಳನ್ನು ನಮ್ಮ ಇಮೇಲ್ ವಿಳಾಸ feedback@guruji.com ಗೆ ಕಳುಹಿಸಿ.



© 2008 Guruji.com